Tuesday, April 30, 2013

ಭಜ ಗೋವಿಂದಂ ರಚನ: ಆದಿ ಶಂಕರಾಚಾರ್ಯ

ರಚನ: ಆದಿ ಶಂಕರಾಚಾರ್ಯ

ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ |
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನಹಿ ನಹಿ ರಕ್ಷತಿ ಡುಕ್ರಿಂಕರಣೇ || 1 ||

ಮೂಢ ಜಹೀಹಿ ಧನಾಗಮತೃಷ್ಣಾಂ
ಕುರು ಸದ್ಬುದ್ಧಿಮ್ ಮನಸಿ ವಿತೃಷ್ಣಾಮ್ |
ಯಲ್ಲಭಸೇ ನಿಜ ಕರ್ಮೋಪಾತ್ತಂ
ವಿತ್ತಂ ತೇನ ವಿನೋದಯ ಚಿತ್ತಮ್ || 2 ||

ನಾರೀ ಸ್ತನಭರ ನಾಭೀದೇಶಂ
ದೃಷ್ಟ್ವಾ ಮಾ ಗಾ ಮೋಹಾವೇಶಮ್ |
ಏತನ್ಮಾಂಸ ವಸಾದಿ ವಿಕಾರಂ
ಮನಸಿ ವಿಚಿಂತಯಾ ವಾರಂ ವಾರಮ್ || 3 ||

ನಳಿನೀ ದಳಗತ ಜಲಮತಿ ತರಳಂ
ತದ್ವಜ್ಜೀವಿತ ಮತಿಶಯ ಚಪಲಮ್ |
ವಿದ್ಧಿ ವ್ಯಾಧ್ಯಭಿಮಾನ ಗ್ರಸ್ತಂ
ಲೋಕಂ ಶೋಕಹತಂ ಚ ಸಮಸ್ತಮ್ || 4 ||

ಯಾವದ್-ವಿತ್ತೋಪಾರ್ಜನ ಸಕ್ತಃ
ತಾವನ್-ನಿಜಪರಿವಾರೋ ರಕ್ತಃ |
ಪಶ್ಚಾಜ್ಜೀವತಿ ಜರ್ಜರ ದೇಹೇ
ವಾರ್ತಾಂ ಕೋ‌உಪಿ ನ ಪೃಚ್ಛತಿ ಗೇಹೇ || 5 ||

ಯಾವತ್-ಪವನೋ ನಿವಸತಿ ದೇಹೇ
ತಾವತ್-ಪೃಚ್ಛತಿ ಕುಶಲಂ ಗೇಹೇ |
ಗತವತಿ ವಾಯೌ ದೇಹಾಪಾಯೇ
ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ || 6 ||

ಬಾಲ ಸ್ತಾವತ್ ಕ್ರೀಡಾಸಕ್ತಃ
ತರುಣ ಸ್ತಾವತ್ ತರುಣೀಸಕ್ತಃ |
ವೃದ್ಧ ಸ್ತಾವತ್-ಚಿಂತಾಮಗ್ನಃ
ಪರಮೇ ಬ್ರಹ್ಮಣಿ ಕೋ‌உಪಿ ನ ಲಗ್ನಃ || 7 ||

ಕಾ ತೇ ಕಾಂತಾ ಕಸ್ತೇ ಪುತ್ರಃ
ಸಂಸಾರೋ‌உಯಮತೀವ ವಿಚಿತ್ರಃ |
ಕಸ್ಯ ತ್ವಂ ವಾ ಕುತ ಆಯಾತಃ
ತತ್ವಂ ಚಿಂತಯ ತದಿಹ ಭ್ರಾತಃ || 8 ||

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಮ್ |
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ || 9 ||

ವಯಸಿ ಗತೇ ಕಃ ಕಾಮವಿಕಾರಃ
ಶುಷ್ಕೇ ನೀರೇ ಕಃ ಕಾಸಾರಃ |
ಕ್ಷೀಣೇ ವಿತ್ತೇ ಕಃ ಪರಿವಾರಃ
ಙ್ಞಾತೇ ತತ್ತ್ವೇ ಕಃ ಸಂಸಾರಃ || 10 ||

ಮಾ ಕುರು ಧನಜನ ಯೌವನ ಗರ್ವಂ
ಹರತಿ ನಿಮೇಷಾತ್-ಕಾಲಃ ಸರ್ವಮ್ |
ಮಾಯಾಮಯಮಿದಮ್-ಅಖಿಲಂ ಹಿತ್ವಾ
ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ || 11 ||

ದಿನ ಯಾಮಿನ್ಯೌ ಸಾಯಂ ಪ್ರಾತಃ
ಶಿಶಿರ ವಸಂತೌ ಪುನರಾಯಾತಃ |
ಕಾಲಃ ಕ್ರೀಡತಿ ಗಚ್ಛತ್ಯಾಯುಃ
ತದಪಿ ನ ಮುಂಚತ್ಯಾಶಾವಾಯುಃ || 12 ||

ದ್ವಾದಶ ಮಂಜರಿಕಾಭಿರ ಶೇಷಃ
ಕಥಿತೋ ವೈಯಾ ಕರಣಸ್ಯೈಷಃ |
ಉಪದೇಶೋ ಭೂದ್-ವಿದ್ಯಾ ನಿಪುಣೈಃ
ಶ್ರೀಮಚ್ಛಂಕರ ಭಗವಚ್ಛರಣೈಃ || 13 ||

ಕಾ ತೇ ಕಾಂತಾ ಧನ ಗತ ಚಿಂತಾ
ವಾತುಲ ಕಿಂ ತವ ನಾಸ್ತಿ ನಿಯಂತಾ |
ತ್ರಿಜಗತಿ ಸಜ್ಜನ ಸಂಗತಿರೇಕಾ
ಭವತಿ ಭವಾರ್ಣವ ತರಣೇ ನೌಕಾ || 14 ||

ಜಟಿಲೋ ಮುಂಡೀ ಲುಂಜಿತ ಕೇಶಃ
ಕಾಷಾಯಾನ್ಬರ ಬಹುಕೃತ ವೇಷಃ |
ಪಶ್ಯನ್ನಪಿ ಚ ನ ಪಶ್ಯತಿ ಮೂಢಃ
ಉದರ ನಿಮಿತ್ತಂ ಬಹುಕೃತ ವೇಷಃ || 15 ||

ಅಂಗಂ ಗಲಿತಂ ಪಲಿತಂ ಮುಂಡಂ
ದಶನ ವಿಹೀನಂ ಜಾತಂ ತುಂಡಮ್ |
ವೃದ್ಧೋ ಯಾತಿ ಗೃಹೀತ್ವಾ ದಂಡಂ
ತದಪಿ ನ ಮುಂಚತ್ಯಾಶಾ ಪಿಂಡಮ್ || 16 ||

ಅಗ್ರೇ ವಹ್ನಿಃ ಪೃಷ್ಠೇ ಭಾನುಃ
ರಾತ್ರೌ ಚುಬುಕ ಸಮರ್ಪಿತ ಜಾನುಃ |
ಕರತಲ ಭಿಕ್ಷಸ್-ತರುತಲ ವಾಸಃ
ತದಪಿ ನ ಮುಂಚತ್ಯಾಶಾ ಪಾಶಃ || 17 ||

ಕುರುತೇ ಗಂಗಾ ಸಾಗರ ಗಮನಂ
ವ್ರತ ಪರಿಪಾಲನಮ್-ಅಥವಾ ದಾನಮ್ |
ಙ್ಞಾನ ವಿಹೀನಃ ಸರ್ವಮತೇನ
ಭಜತಿ ನ ಮುಕ್ತಿಂ ಜನ್ಮ ಶತೇನ || 18 ||

ಸುರಮಂದಿರ ತರು ಮೂಲ ನಿವಾಸಃ
ಶಯ್ಯಾ ಭೂತಲಮ್-ಅಜಿನಂ ವಾಸಃ |
ಸರ್ವ ಪರಿಗ್ರಹ ಭೋಗತ್ಯಾಗಃ
ಕಸ್ಯ ಸುಖಂ ನ ಕರೋತಿ ವಿರಾಗಃ || 19 ||

ಯೋಗರತೋ ವಾ ಭೋಗರತೋ ವಾ
ಸಂಗರತೋ ವಾ ಸಂಗವಿಹೀನಃ |
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ
ನಂದತಿ ನಂದತಿ ನಂದತ್ಯೇವ || 20 ||

ಭಗವದ್ಗೀತಾ ಕಿಂಚಿದಧೀತಾ
ಗಂಗಾ ಜಲಲವ ಕಣಿಕಾ ಪೀತಾ |
ಸಕೃದಪಿ ಯೇನ ಮುರಾರೀ ಸಮರ್ಚಾ
ಕ್ರಿಯತೇ ತಸ್ಯ ಯಮೇನ ನ ಚರ್ಚಾ || 21 ||

ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಮ್ |
ಇಹ ಸಂಸಾರೇ ಬಹು ದುಸ್ತಾರೇ
ಕೃಪಯಾ‌உಪಾರೇ ಪಾಹಿ ಮುರಾರೇ || 22 ||

ರಥ್ಯಾ ಚರ್ಪಟ ವಿರಚಿತ ಕಂಥಃ
ಪುಣ್ಯಾಪುಣ್ಯ ವಿವರ್ಜಿತ ಪಂಥಃ |
ಯೋಗೀ ಯೋಗ ನಿಯೋಜಿತ ಚಿತ್ತಃ
ರಮತೇ ಬಾಲೋನ್ಮತ್ತವದೇವ || 23 ||

ಕಸ್ತ್ವಂ ಕೋ‌உಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ ತಾತಃ |
ಇತಿ ಪರಿಭಾವಯ ನಿಜ ಸಂಸಾರಂ
ಸರ್ವಂ ತ್ಯಕ್ತ್ವಾ ಸ್ವಪ್ನ ವಿಚಾರಮ್ || 24 ||

ತ್ವಯಿ ಮಯಿ ಸರ್ವತ್ರೈಕೋ ವಿಷ್ಣುಃ
ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ |
ಭವ ಸಮಚಿತ್ತಃ ಸರ್ವತ್ರ ತ್ವಂ
ವಾಞ್ಛಸ್ಯಚಿರಾದ್-ಯದಿ ವಿಷ್ಣುತ್ವಮ್ || 25 ||

ಶತ್ರೌ ಮಿತ್ರೇ ಪುತ್ರೇ ಬಂಧೌ
ಮಾ ಕುರು ಯತ್ನಂ ವಿಗ್ರಹ ಸಂಧೌ |
ಸರ್ವಸ್ಮಿನ್ನಪಿ ಪಶ್ಯಾತ್ಮಾನಂ
ಸರ್ವತ್ರೋತ್-ಸೃಜ ಭೇದಾಙ್ಞಾನಮ್ || 26 ||

ಕಾಮಂ ಕ್ರೋಧಂ ಲೋಭಂ ಮೋಹಂ
ತ್ಯಕ್ತ್ವಾ‌உ‌உತ್ಮಾನಂ ಪಶ್ಯತಿ ಸೋ‌உಹಮ್ |
ಆತ್ಮಙ್ಞ್ನಾನ ವಿಹೀನಾ ಮೂಢಾಃ
ತೇ ಪಚ್ಯಂತೇ ನರಕ ನಿಗೂಢಾಃ || 27 ||

ಗೇಯಂ ಗೀತಾ ನಾಮ ಸಹಸ್ರಂ
ಧ್ಯೇಯಂ ಶ್ರೀಪತಿ ರೂಪಮ್-ಅಜಸ್ರಮ್ |
ನೇಯಂ ಸಜ್ಜನ ಸಂಗೇ ಚಿತ್ತಂ
ದೇಯಂ ದೀನಜನಾಯ ಚ ವಿತ್ತಮ್ || 28 ||

ಸುಖತಃ ಕ್ರಿಯತೇ ರಾಮಾಭೋಗಃ
ಪಶ್ಚಾದ್ಧಂತ ಶರೀರೇ ರೋಗಃ |
ಯದ್ಯಪಿ ಲೋಕೇ ಮರಣಂ ಶರಣಂ
ತದಪಿ ನ ಮುಂಚತಿ ಪಾಪಾಚರಣಮ್ || 29 ||

ಅರ್ಥಮನರ್ಥಂ ಭಾವಯ ನಿತ್ಯಂ
ನಾಸ್ತಿ ತತಃ ಸುಖ ಲೇಶಃ ಸತ್ಯಮ್ |
ಪುತ್ರಾದಪಿ ಧನಭಾಜಾಂ ಭೀತಿಃ
ಸರ್ವತ್ರೈಷಾ ವಿಹಿತಾ ರೀತಿಃ || 30 ||

ಪ್ರಾಣಾಯಾಮಂ ಪ್ರತ್ಯಾಹಾರಂ
ನಿತ್ಯಾನಿತ್ಯ ವಿವೇಕ ವಿಚಾರಮ್ |
ಜಾಪ್ಯಸಮೇತ ಸಮಾಧಿ ವಿಧಾನಂ
ಕುರ್ವ ವಧಾನಂ ಮಹದ್-ಅವಧಾನಮ್ || 31 ||

ಗುರು ಚರಣಾಂಭುಜ ನಿರ್ಭರಭಕ್ತಃ
ಸಂಸಾರಾದ್-ಅಚಿರಾದ್-ಭವ ಮುಕ್ತಃ |
ಸೇಂದಿಯ ಮಾನಸ ನಿಯಮಾದೇವಂ
ದ್ರಕ್ಷ್ಯಸಿ ನಿಜ ಹೃದಯಸ್ಥಂ ದೇವಮ್ || 32 ||

ಮೂಢಃ ಕಶ್ಚಿನ ವೈಯಾಕರಣೋ
ಡುಕೃಣ್ಕರಣಾಧ್ಯಯನ ಧುರೀಣಃ |
ಶ್ರೀಮಚ್ಛಂಕರ ಭಗವಚ್ಚಿಷ್ಯೈಃ
ಬೋಧಿತ ಆಸೀಚ್ಛೋದಿತ ಕರಣೈಃ || 33 ||

Thursday, April 25, 2013

ಪುಣ್ಯಕೋಟಿ ಗೋವಿನ ಹಾಡು (Punyakoti Govina Haadu Lyrics)

ಧರಣಿ ಮಂಡಲ ಮಧ್ಯದೊಳಗೆ 
ಮೆರೆಯುತಿಹ ಕರ್ಣಾಟ ದೇಶದೊಳಿರುವ 
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು 

ಉದಯ ಕಾಲದೊಳೆದ್ದು ಗೊಲ್ಲನು 
ನದಿಯ ಸ್ನಾನವ ಮಾಡಿಕೊಂಡು 
ಮುದದಿ ತಿಲಕವ ಹಣೆಯೊಳಿಟ್ಟು
ಚತುರ ಶಿಖೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ 
ಕೊಳಲನೂದುತ ಗೊಲ್ಲ ಗೌಡನು 
ಬಳಸಿ ನಿಂದ ತುರುಗಳನ್ನು 
ಬಳಿಗೆ ಕರೆದನು ಹರುಷದಿ 

ಗಂಗೆ ಬಾರೆ ಗೌರಿ ಬಾರೆ 
ತುಂಗಭದ್ರೆ ತಾಯಿ ಬಾರೆ 
ಪುಣ್ಯಕೋಟಿ ನೀನು ಬಾರೇ 
ಎಂದು ಗೊಲ್ಲನು ಕರೆದನು 

ಗೊಲ್ಲ ಕರೆದ ಧ್ವನಿಯ ಕೇಳಿ 
ಎಲ್ಲ ಹಸುಗಳು ಬಂದು ನಿಂತು 
ಚೆಲ್ಲಿ ಸೂಸಿ ಹಾಲು ಕರೆಯಲು 
ಅಲ್ಲಿ ತುಂಬಿತು ಬಿಂದಿಗೆ 

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು 

ಹಬ್ಬಿದ ಮಲೆ ಮಧ್ಯದೊಳಗೆ 
ಅರ್ಭುತಾನೆಂದೆಂಬ ವ್ಯಾಘ್ರನು 
ಅಬ್ಬರಿಸಿ ಹಸಿಹಸಿದು ಬೆಟ್ಟದ 
ಕಿಬ್ಬಿಯೊಳು ತಾನಿದ್ದನು 

ಸಿಡಿದು ರೋಷದಿ ಮೊರೆಯುತಾ ಹುಲಿ 
ಘುಡುಘುಡಿಸಿ ಭೋರಿಡುತ ಛಂಗನೆ 
ತುಡುಕಲೆರಗಿದ ರಭಸಕಂಜಿ 
ಚೆದರಿ ಹೋದವು ಹಸುಗಳು 

ಪುಣ್ಯಕೋಟಿ ಎಂಬ ಹಸುವು 
ತನ್ನ ಕಂದನ ನೆನೆದುಕೊಂಡು 
ಮುನ್ನ ಹಾಲನು ಕೊಡುವೆನೆನುತ 
ಚೆಂದದಿ ತಾ ಬರುತಿರೆ 

ಇಂದೆನಗೆ ಆಹಾರ ಸಿಕ್ಕಿತು 
ಎಂದು ಬೇಗನೆ ದುಷ್ಟ ವ್ಯಾಘ್ರನು 
ಬಂದು ಬಳಸಿ ಅಡ್ಡಗಟ್ಟಿ 
ನಿಂದನಾ ಹುಲಿರಾಯನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು 

ಮೇಲೆ ಬಿದ್ದು ನಿನ್ನನೀಗಲೆ 
ಬೀಳಹೊಯ್ವೆನು ನಿನ್ನ ಹೊಟ್ಟೆಯ 
ಸೀಳಿಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು 

ಒಂದು ಬಿನ್ನಹ ಹುಲಿಯೆ ಕೇಳು 
ಕಂದನಿರುವನು ದೊಡ್ಡಿಯೊಳಗೆ 
ಒಂದು ನಿಮಿಷದಿ ಮೊಲೆಯ ಕೊಟ್ಟು 
ಬಂದು ಸೇರುವೆನಿಲ್ಲಿಗೆ 

ಹಸಿದ ವೇಳೆಗೆ ಸಿಕ್ಕಿದೊಡವೆಯ 
ವಶವ ಮಾಡದೆ ಬಿಡಲು ನೀನು 
ನುಸುಳಿ ಹೋಗುವೆ ಮತ್ತೆ ಬರುವೆಯ 
ಹುಸಿಯನಾಡುವೆ ಎಂದಿತು 

ಸತ್ಯವೇ ನಮ್ಮ ತಾಯಿ ತಂದೆ 
ಸತ್ಯವೇ ನಮ್ಮ ಬಂಧು ಬಳಗ 
ಸತ್ಯ ವಾಕ್ಯಕೆ ತಪ್ಪಿ ನಡೆದರೆ 
ಮೆಚ್ಚನಾ ಪರಮಾತ್ಮನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು 

ಕೊಂದು ತಿನ್ನುವೆನೆಂಬ ಹುಲಿಗೆ 
ಚೆಂದದಿಂದ ಭಾಷೆ ಇತ್ತು 
ಕಂದ ನಿನ್ನನು ನೋಡಿ ಹೋಗುವೆ 
ನೆಂದು ಬಂದೆನು ದೊಡ್ಡಿಗೆ 

ಆರ ಮೊಲೆಯನು ಕುಡಿಯಲಮ್ಮ?
ಆರ ಸೇರಿ ಬದುಕಲಮ್ಮ? 
ಆರ ಬಳಿಯಲಿ ಮಲಗಲಮ್ಮ?
ಆರು ನನಗೆ ಹಿತವರು? 

ಅಮ್ಮಗಳಿರಾ ಅಕ್ಕಗಳಿರಾ 
ನಮ್ಮ ತಾಯೊಡಹುಟ್ಟುಗಳಿರಾ 
ನಿಮ್ಮ ಕಂದನೆಂದು ಕಾಣಿರಿ 
ತಬ್ಬಲಿಯನೀ ಕರುವನು 

ಮುಂದೆ ಬಂದರೆ ಹಾಯಬೇಡಿ 
ಹಿಂದೆ ಬಂದರೆ ಒದೆಯಬೇಡಿ 
ಕಂದ ನಿಮ್ಮವನೆಂದು ಕಾಣಿರಿ 
ತಬ್ಬಲಿಯನೀ ಕರುವನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು 

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು 
ಇಬ್ಬರ ಋಣ ತೀರಿತೆಂದು 
ತಬ್ಬಿಕೊಂಡಿತು ಕಂದನ 

ಗೋವು ಕರುವನು ಬಿಟ್ಟು ಬಂದು 
ಸಾವಕಾಶವ ಮಾಡದಂತೆ 
ಗವಿಯ ಬಾಗಿಲ ಸೇರಿ ನಿಂತು 
ತವಕದಲಿ ಹುಲಿಗೆಂದಿತು 

ಖಂಡವಿದೆಕೋ ಮಾಂಸವಿದೆಕೋ 
ಗುಂಡಿಗೆಯ ಬಿಸಿ ರಕ್ತವಿದೆಕೋ 
ಚಂಡ ವ್ಯಾಘ್ರನೆ ನೀನಿದೆಲ್ಲವ 
ನುಂಡು ಸಂತಸದಿಂದಿರು 

ಪುಣ್ಯಕೋಟಿಯ ಮಾತ ಕೇಳಿ 
ಕಣ್ಣ ನೀರನು ಸುರಿಸಿ ನೊಂದು 
ಕನ್ನೆಯಿವಳನು ಕೊಂದು ತಿಂದರೆ 
ಮೆಚ್ಚನಾ ಪರಮಾತ್ಮನು 

ಎನ್ನ ಒಡಹುಟ್ಟಕ್ಕ ನೀನು 
ನಿನ್ನ ಕೊಂದು ಏನ ಪಡೆವೆನು? 
ಎನ್ನುತ ಹುಲಿ ಹಾರಿ ನೆಗೆದು 
ತನ್ನ ಪ್ರಾಣವ ಬಿಟ್ಟಿತು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು 

ಪುಣ್ಯಕೋಟಿಯು ನಲಿದು ಕರುವಿಗೆ 
ಉಣ್ಣಿಸಿತು ಮೊಲೆಯ ಬೇಗದಿ 
ಚೆನ್ನ ಗೊಲ್ಲನ ಕರೆದು ತಾನು
ಮುನ್ನ ತಾನಿಂತೆಂದಿತು 

ಎನ್ನ ವಂಶದ ಗೋವ್ಗಳೊಳಗೆ 
ನಿನ್ನ ವಂಶದ ಗೊಲ್ಲರೊಳಗೆ 
ಮುನ್ನ ಪ್ರತಿ ಸಂಕ್ರಾಂತಿಯೊಳಗೆ 
ಚೆನ್ನ ಕೃಷ್ಣನ ಭಜಿಸಿರೈ 

ಈವನು ಸೌಭಾಗ್ಯ ಸಂಪದ 
ಭಾವಜಪಿತ ಕೃಷ್ಣನು

Monday, August 20, 2012

ಸ್ವಾಮಿ ವಿವೇಕಾನಂದ

ನಿರಂತರ ಪ್ರಯತ್ನವೇ ಜೀವನ; ತುದಿಮುಟ್ಟಿದೆವೆಂದು ನಿಲ್ಲುವುದೇ ಮೃತ್ಯು.
ಸಲ ಸಲವೂ ತನ್ನನ್ನು ತಾನು ಮೀರಲೆಳಸುವುದೇ ಸಾಧನೆ.
ಅನಂತವಾದ ಆತ್ಮವನ್ನು ಅನಂತವಾಗಿಯೇ ಸಾಧಿಸ ಬೇಕು.
ಸಿದ್ಧಿ ಎಂದರೆ ಕಾಲದಲ್ಲಿ ಕೊನೆಮುಟ್ಟುವುದೆಂದಲ್ಲ; ಕಾಲವನ್ನೇ ನುಂಗಿ ಮೀರುವುದು. 

Wednesday, June 20, 2012

ಯಾಕೆ ಬಡೆದಾಡ್ತಿ ತಮ್ಮ ಮಾಯಾ ಮೆಚ್ಚಿ ಸಂಸಾರ ಮೆಚ್ಚಿ

ಯಾಕೆ ಬಡೆದಾಡ್ತಿ ತಮ್ಮ ಮಾಯಾ ಮೆಚ್ಚಿ ಸಂಸಾರ ಮೆಚ್ಚಿ |
ನೀನೂಗದರಿಯೇ ತಮ್ಮ ಕಣ್ಣ ಮುಚ್ಚಿ ಮಣ್ಣ ಮುಚ್ಚಿ||

ಹೆಂಡ್ರು ಮಕ್ಕಳಿರುವರು ತಮ್ಮ ಎಲ್ಲಿ ತನಕ |
ಇದ್ದರೆ ತಿಮ್ಬೋತನಕ  ||
ಸತ್ತಾಗ ಬರುವರು ತಮ್ಮ ಕುಣಿತನಕ |
ಮಣ್ಣು ಮುಚ್ಚೋತನಕ ||

ಅಣ್ಣ  ತಮ್ಮ ಅಕ್ಕ ತಂಗಿ ಎಲ್ಲಿತನಕ |
ಬದುಕಿ ಬೆಳೆಯೋತನಕ ||
ಸತ್ತಾಗ ಬರುವರು ತಮ್ಮ ಕುಣಿತನಕ |
ಮಣ್ಣು ಮುಚ್ಚೋತನಕ ||

ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲಿತನಕ |
ನಿನ್ನ ಕೊರಳಿಗೆ ಕುಣಿಕೆ ಬಿಳೋತನಕ ||
ನಿನ್ನಾಸೆ ಪ್ರಾಣ ಪಕ್ಷಿ ಹರೋ ತನಕ |
ಕಳಚಯ್ಯ ಮಾಯದ ಪೊರೆಯ ಮುಕ್ತಿ ಹೊಂದಾಟ ||

ಒಡೆಯದ ಒಡಪೆ ಒಲವಿನ ಮುಡಿಪೇ

ಒಡೆಯದ ಒಡಪೆ ಒಲವಿನ ಮುಡಿಪೇ ಸನಿಹಕೆ ಸೆಳೆದವಳೇ
ಕಾಡುವ ಕನಸೇ ಕನ್ನಡಿ ತಿನಿಸೇ ದೂರವೇ ಉಳಿದವಳೇ
ಬಾರೆ ಬಾಬಳಿಗೆ ಇಂದೇ ಈಗಳಿಗೆ ಬಾ ಬಾ...

ಮಾಯಾ ಜಿಂಕೆಯ ನಡೆಯವಳೇ ಬೆಡಗಿನ ನಿಗೂಡ ನುಡಿಯವಳೇ 
ನೋಟದ ತುಂಬಾ ನಿನ್ನದೇ ಬಿಂಬ ನಾನ್ನೀ  ಕಂಗಳಿಗೆ
ಬಾರೆ ಬಾಬಳಿಗೆ ಇಂದೇ ಈಗಳಿಗೆ ಬಾ ಬಾ...

ಕಿನ್ನರಲೋಕದ ಕನ್ನಿಕೆಯೇ ನಿಜವನು ಮರೆಸುವ ಜವನಿಕೆಯೇ
ಕವಿದರು ಇರುಳು ನೀ ಬಳಿ ಇರಲು ಉಜ್ವಳದೀವಳಿಗೆ
ಬಾರೆ ಬಾಬಳಿಗೆ ಇಂದೇ ಈಗಳಿಗೆ ಬಾ ಬಾ...

ಕಲ್ಪನೆಯಲ್ಲೇ ಎಷ್ಟು ದಿನ ಕಾಡುವೆ ಹೀಗೆ ಪ್ರಿಯಕರನ
ಬಾ ಕನಿಕರಿಸಿ ನನ್ನನುವರಿಸಿ ಬಾಳಿನ _________
ಬಾರೆ ಬಾಬಳಿಗೆ ಇಂದೇ ಈಗಳಿಗೆ ಬಾ ಬಾ...

Thursday, March 8, 2012

ಧರ್ಮ

ಶ್ರೀ ತ.ರಾ.ಸು  ಅವರ ರಕ್ತ ರಾತ್ರಿ ಕಾದಂಬರಿಯ, ೧೧೭ - ೧೧೮ ಪುಟದಿಂದ.

ಧರ್ಮ ಮಾರುಕಟ್ಟೆಯಲ್ಲ. ಗುರು ವ್ಯಾಪಾರಿಯಲ್ಲ. ನೀನು ಶಿಷ್ಯತ್ವದ ಬೆಲೆ ಕೊಟ್ಟರೆ, ನಿನಗೆ ನನ್ನ ಅನುಗ್ರಹದ, ಆಶೀರ್ವಾದ ಮಾಲು ಕೊಡುತ್ತೇನೆ ಎನ್ನುವ ಕ್ಷುದ್ರ ವ್ಯಾಪಾರವೇ ಧರ್ಮ ? ನಾಯಕರು ಸ್ವಧರ್ಮೀಯರಲ್ಲ. ಅದಕ್ಕಾಗಿ ನಾವು ಅವರಿಗಾಗಿ ದುಡಿಯಬಾರದು; ಅವರ ತಲೆ ಹೋದರು ನಾವು ಸುಮ್ಮನಿರಬೇಕು, ಅಲ್ಲವೇ ? ಆ ಮಾತನ್ನೇ ಇನ್ನು ಅಷ್ಟು ದೂರ  ಎಳೆದು ನೋಡು. ಇದು ಎಲ್ಲಿಗೆ ನಿಲ್ಲುತದೆಯೋ. ಎಲ್ಲರೂ ನಿನ್ನ ಹಾಗೇ ಯೋಚಿಸಿದರೆ, ತಮ್ಮ ಧರ್ಮಿಯರಲ್ಲದೆ ಉಳಿದವರಿಗೆ ಒಳಿತಾಗಬರದು ಏನು ಚಿಂತಿಸಿದರೆ-- ಆಗ ನನ್ನ ನಿನ್ನ ತಲೆ ಉಳಿದೀತೇನೋ ಯೋಚಿಸು. ಊಹು -- ಭೂಮಿ ಪರಸ್ಪರ ಹೋರಾಟದ ಕುರುಕ್ಷೆತ್ರವಾಗಿ, ನೆತ್ತರ ಕಡಲಾಗಿಹೊಗುತ್ತದೆ. ಆ ರಕ್ತ ಪ್ರಳಯದಲ್ಲಿ ಮನುಷ್ಯನೂ ಉಳಿಯುವುದಿಲ್ಲ; ಧರ್ಮವೂ ಉಳಿಯುವುದಿಲ್ಲ. ಜಗತ್ತೂ ಉಳಿಯುವುದಿಲ್ಲ. ನಿಮ್ಮಂತಹ ಶಿಷ್ಯರು ಬಂದೇ ಎಷ್ಟೂ ಧರ್ಮಗಳು ನೆತ್ತರುಗೆಸರಿನಲ್ಲಿ ಹೆಸರುಳಿಯದೆ ಅಳಿಸಿಹೂಗಿರುವುದು. ನಿನ್ನಂತಹ ಶಿಷ್ಯರೇ ದೊರೆತರೆ ನಾಳೆ ವೀರಶೈವ ಧರ್ಮಕಾಗುವುದೂ ಅದೇ ಗತಿಯೇ. ಛಿ! ಬಿಡು ಆ ಬುದ್ಧಿಯನ್ನು. ಧರ್ಮ ಜನಕ್ಕೆ ದಾರಿ ತೋರುವ ದೀಪ; ಯಾವುದೋ ಕುರುಡುದಾರಿಯಲ್ಲಿ ನಡೆಸುವ ಕನ್ನಕಪಟವಲ್ಲ. ಸಕಲ ಲೋಕಕ್ಕೆ ಶ್ರೇಯಾಭಿಲಾಷಿಯಾದ ಈ ಕಲ್ಯಾಣಜ್ಯೋತಿಯನ್ನು, ನಮ್ಮ ಪಂಥಕ್ಕೆ ಬರದವರನ್ನು  ಸುಡುವ ಚಿತಾಗ್ನಿಯಾಗಿ ಮಾಡುವ, ಸತ್ತವರನ್ನು ಬದುಕಿಸುವ ಅಮೃತಕ್ಕೆ ಸ್ವಾರ್ಥದ ನಂಜು ಬೆರೆಸಿ, ಲೋಕಮಾರಕವಾದ ಹಾಲಾಹಲವನ್ನಾಗಿ ಮಾಡುವ ಅಂಧಬುದ್ಧಿ ಯೊಂದನ್ನೇನೇ ನೀವು ವೀರಶೈವ ಧರ್ಮವನ್ನು ಅವಲಂಬಿಸಿ ಕಲಿತದ್ದು ! ಶರಣನೆಂದುಕೊಂಡರೆ ಏನೆಂದುಕೊಂಡೆ ? ಸ್ವಾರ್ಥದ ಗಾಣವಾಡಿಸುವ ಗಾಣಿಗ ಎಂದುಕೊಂಡೆಯಾ ? ಶರಣ ಗಂಧದ ಕೊರಡಿದ್ದಂತೆ; ತಾನು ತೇಯ್ದು ಲೋಕಕ್ಕೆ ಕಂಪನ್ನೊಡಬೇಕು; ಕಬ್ಬಿನಂತೆ ತಾನು ಹಿಂಡಿ ಲೋಕಕ್ಕೆ ಸುಧೆಯುಣಿಸಬೇಕು; ಲಿಂಗದೀಕ್ಷೆ ಈ ಪವಿತ್ರ ವ್ರತದ ರತ್ನಕಂಕಣ. 'ದಯೆಯೇ ಧರ್ಮದ ಮೂಲವಯ್ಯ' ಎಂದು ಸಾರಿ, ವೀರಶೈವ ಧರ್ಮಕ್ಕೆ ರತ್ನಸಿಂಹಾಸನವನ್ನು ಸ್ಥಾಪಿಸಿದ ಜಗಜ್ಯೋತಿ ಬಸವಣ್ಣನವರನ್ನು, ನಿನ್ನ ಸ್ವಾರ್ಥದ ಫಲಾಫಲವನ್ನು ತೂಗುವ ತಕ್ಕಡಿಯನ್ನಾಗಿ ಮಾಡಬೇಡ. ಸಾಧ್ಯವಿದ್ದರೆ, ಅವರನ್ನು ಗುರುಗಳು ಎಂದುಕೊಂಡ ನೀನು ಅವರ ಮಟ್ಟಕ್ಕೆ ಏರಬೇಕು. ಆ ಶಕ್ತಿ ಇಲ್ಲದಿದ್ದರೆ, ಆ ದಿವ್ಯಾತ್ಮಗಳನ್ನು ನಿನ್ನ ಅಲ್ಪತನದ ಮಟ್ಟಕ್ಕೆ ಎಳೆದು, ಅವರ ಶಿಷ್ಯರೆಂದೇ ಹೇಳಿಕೊಂಡು ಅವರಿಗೆ ಅಪಮಾನ ಮಾಡಬೇಡ. ಸ್ವಾರ್ಥದ ಪಶು, ಮೆಯ್ದು ಕೊಬ್ಬುವ ಹುಲ್ಲುಗಾವಲಲ್ಲ ಧರ್ಮ. ಈ ಧರ್ಮದೀಕ್ಷಾಬದ್ಧರಾದವರು ಏನು ಮಾಡಿದರೂ ಶಿವ ಮೆಚ್ಚಲಿ ಎಂದು ಮಾಡಬೇಕು ನುಡಿಯಬೇಕು ಹೊರತು, ಇದರಲ್ಲಿ ನನಗೇನು ಸಿಕ್ಕಿತು ಎಂದು ಕಂಡವರ ಚಿನ್ನವನ್ನು ತನ್ನ ಒರೆಗಲ್ಲಿಗೆ ಉಜ್ಜಿಕೊಂಡು. ಗುಂಜಿ ತೂಕದ ಚಿನ್ನ ಗಳಿಸುವ ಚಿನಿವಾರ ಬುದ್ಧಿಗೆ ಇಲ್ಲಿ ಎಡೆಯಿಲ್ಲ. ನಿನ್ನ ಹಾಗೇ ನಾವೂ ಆಡಿದರೆ ನಾಳೆ ಈ ಧರ್ಮ ರಸಾತಳಕ್ಕಿಳಿದು ಹೋದೀತು; ಶಿವತಂದೆ ಪ್ರಕ್ಷುಬ್ಧನಾಗಿ ರುದ್ರನಾಗಿ ನಮ್ಮ, ನಿಮ್ಮ , ಎಲ್ಲರ ತಲೆಯನ್ನು ಬೇಟೆಯಾಡಿಯಾನು.

Thursday, December 8, 2011

ನೇತ್ರದಂದದೆ ನೋಟ

ಸತ್ಯ ಶಿವ ಸುಂದರದ ಸಚ್ಚಿದಾನಂದನದ |
ಭಿತ್ತಿಯಲಿ ಬಣ್ಣ ಬಣ್ಣದ ಜೀವಚಿತ್ರ ||
ನಿತ್ಯ ನೀನದ ನೆನೆದು ಚಿತ್ರದಲಿ ಮನವರಿಸೆ
ವೃತ್ತಿ ತನ್ಮಯವಹುದೋ -- ಮಂಕುತಿಮ್ಮ ||

ಸತ್ಯವೆಂಬುದೆಲ್ಲಿ ? ನಿನ್ನಂತರಂಗದೊಳೊ |
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ವದರ್ಶನವಹುದು -- ಮಂಕುತಿಮ್ಮ ||

ಬ್ರಹ್ಮೊದ್ಯನ

ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು |
ತಿರೆಗುರುಳುವುದು ತನ್ನ ಬಲವ ತಾಂ ಕಳೆದು ||
ನರನುಮಂತೆಯೆ ಸುತ್ತಿ ಸುತ್ತಿ ಕಡೆಗೊಂದು ದಿನ |
ತೆರುವನಸ್ಥಿಯ ಧರೆಗೆ --
ಮಂಕುತಿಮ್ಮ ||

Wednesday, October 19, 2011

ಯಾತಕ್ಕೆ ಮಳೆ ಹೋದವೋ ಶಿವ ಶಿವ ಶಿವ... ಲೋಕಾ ತಲ್ಲಣಿಸುತಾವೋ...

ಯಾತಕ್ಕೆ ಮಳೆ ಹೋದವೋ ಶಿವ ಶಿವ ಶಿವ |
ಲೋಕಾ ತಲ್ಲಣಿಸುತಾವೋ  ಶಿವ ಶಿವ ||
ಬೇಕಿಲ್ಲಾದಿದ್ದರೆ  ಬೆಂಕಿಯ ಮಳೆ ಸುರಿದು |
ಉರಿಸಿ ಕೊಲ್ಲಲುಬಾರದೆ!! ||

ಹೊಟ್ಟೆಗೆ ಅನ್ನ ಇಲ್ಲಾದಲೇ  |
ನಡೆದರೆ ಜೋಲಿ ಹೊಡೆಯುತೆಲೆ ||
ಪಟ್ಟದಾನೆಯಂತ ಸ್ತ್ರಿಯಾರು ಸೊರಗಿ |
ಸೀರೆ ನಿಲ್ಲೋದಿಲ್ಲ ಸೊಂಟಾದೇಲೆ ||

ಹಸುಗೂಸು ಹಸುವಿಗೆ ತಾಳದೆಲೆ |
ಅಳುತಾವೆ ರೊಟ್ಟೀ ಕೇಳುತಲೇ ||
ಹಡೆದ ಬಾಣಂತಿಗೆ  ಅನ್ನಾವು  ಇಲ್ಲದೆಲೆ |
ಏರುತಾವೆ   ಮೊಳಕೈಗೆ ಬಳೆ ||

ಒಕ್ಕಾಲು  ಮಕ್ಕಳಂತೆ |
ಅವರಿನ್ನು ಮಕ್ಕಳನು ಮಾರುಂಡರು  ||
ಮಕ್ಕಳನು ಮಾರುಂಡು ದುಕ್ಕವನ್ನು ಮಡುತಾರೆ  |
ಮುಕ್ಕಣ್ಣ ಮಳೆ ಕರುಣಿಸೂ ||