Wednesday, October 19, 2011

ಯಾತಕ್ಕೆ ಮಳೆ ಹೋದವೋ ಶಿವ ಶಿವ ಶಿವ... ಲೋಕಾ ತಲ್ಲಣಿಸುತಾವೋ...

ಯಾತಕ್ಕೆ ಮಳೆ ಹೋದವೋ ಶಿವ ಶಿವ ಶಿವ |
ಲೋಕಾ ತಲ್ಲಣಿಸುತಾವೋ  ಶಿವ ಶಿವ ||
ಬೇಕಿಲ್ಲಾದಿದ್ದರೆ  ಬೆಂಕಿಯ ಮಳೆ ಸುರಿದು |
ಉರಿಸಿ ಕೊಲ್ಲಲುಬಾರದೆ!! ||

ಹೊಟ್ಟೆಗೆ ಅನ್ನ ಇಲ್ಲಾದಲೇ  |
ನಡೆದರೆ ಜೋಲಿ ಹೊಡೆಯುತೆಲೆ ||
ಪಟ್ಟದಾನೆಯಂತ ಸ್ತ್ರಿಯಾರು ಸೊರಗಿ |
ಸೀರೆ ನಿಲ್ಲೋದಿಲ್ಲ ಸೊಂಟಾದೇಲೆ ||

ಹಸುಗೂಸು ಹಸುವಿಗೆ ತಾಳದೆಲೆ |
ಅಳುತಾವೆ ರೊಟ್ಟೀ ಕೇಳುತಲೇ ||
ಹಡೆದ ಬಾಣಂತಿಗೆ  ಅನ್ನಾವು  ಇಲ್ಲದೆಲೆ |
ಏರುತಾವೆ   ಮೊಳಕೈಗೆ ಬಳೆ ||

ಒಕ್ಕಾಲು  ಮಕ್ಕಳಂತೆ |
ಅವರಿನ್ನು ಮಕ್ಕಳನು ಮಾರುಂಡರು  ||
ಮಕ್ಕಳನು ಮಾರುಂಡು ದುಕ್ಕವನ್ನು ಮಡುತಾರೆ  |
ಮುಕ್ಕಣ್ಣ ಮಳೆ ಕರುಣಿಸೂ ||


Monday, October 3, 2011

ನಾನಾರೆಂಬುದು ನಾನಲ್ಲ, ಈ ಮಾನುಷ ಜನ್ಮವು ನಾನಲ್ಲ...

ನಾನಾರೆಂಬುದು  ನಾನಲ್ಲ, ಈ ಮಾನುಷ ಜನ್ಮವು ನಾನಲ್ಲ |
ನಾರಾಯಣವರ ಬ್ಹ್ರಂಹಸದಾಶಿವ, ನೀಯೆಣಿಸುವ ಗುಣ ನಾನಲ್ಲ ||

ಮಾತಾಪಿತಸುತ ನಾನಲ್ಲ, ಭೂನಾಥನಾದವ ನಾನಲ್ಲ |
ಜಾತಿಗೋತ್ರಗಳು ನಾನಲ್ಲ, ಬಹು ಪ್ರೀತಿಯ ಸತಿಸುಥ ನಾನಲ್ಲ ||

ವೇದ ಓದುಗಳು ನಾನಲ್ಲ, ಬರಿ ವಾದ ಮಾಡಿದವ  ನಾನಲ್ಲ |
ನಾದಬಿಂದು ಕಳಬೇಧವಸ್ತು  ನಿಜ ಬೋದದವದಲ್ಲಿದವ ನಾನಲ್ಲ ||

ನಾನೀಬೇಧವು ನಾನಲ್ಲ, ನಾ ಶಿಶುನಾಳದೀಶನ  ಬಿಡಲಿಲ್ಲ |
ನಾ ಅಳಿಯದೆ ನಾತಿಳಿಯಲುಬಾರದು  ನೀಯೆಣಿಸುವ  ಗುಣ ನಾನಲ್ಲ ||

ಶಿವಲೋಕದಿಂದ ಒಬ್ಬ ಸಾದು ಬಂದಾನೋ...

ಶಿವಲೋಕದಿಂದ ಒಬ್ಬ ಸಾದು ಬಂದಾನೋ |
ಶಿವನಾಮವನ್ನು ಕೇಳಿ ಅಲ್ಲಿನಿಂತಾನೋ||

ಮೈತುಂಬ ಬೂದಿಯನ್ನು ದರಸಿಕೊಂಡಾನು |
ಕೊರಳೊಳು ರುದ್ರಾಕ್ಷಿ ಕಟ್ಟಿಕೊಂಡಾನು||
ಮೈಯಲ್ಲಿ ಕಪನೀಯ ತೊಟ್ಟುಕೊಂಡಾನು |
ಕೈಯಲ್ಲಿ ತ್ರಿಶೂಲ ಹಿಡಿದುಕೊಂಡನು ||

ಊರಹೊರಗೆ ಒಂದು ಮಠ  ಕಟ್ಟಿಸ್ಯನೋ |
ಮಠದ ಬಾಗಿಲೊಳಗೆ ತಾನೇ ನಿಂತನೋ ||
ಒಂಬತ್ತು ಬಾಗಿಲ ಮನೆಗೆ ಹಚ್ಯನೋ |
ದರೆಯೋಳು ಮೆರೆಯುವ ಶಿಶುನಾಳ ದೀಶನು, ಶಿಷ್ಯ ಶರೀಫನ ಕೂನ ಹಿಡಿದಾನೋ ||