Monday, August 20, 2012

ಸ್ವಾಮಿ ವಿವೇಕಾನಂದ

ನಿರಂತರ ಪ್ರಯತ್ನವೇ ಜೀವನ; ತುದಿಮುಟ್ಟಿದೆವೆಂದು ನಿಲ್ಲುವುದೇ ಮೃತ್ಯು.
ಸಲ ಸಲವೂ ತನ್ನನ್ನು ತಾನು ಮೀರಲೆಳಸುವುದೇ ಸಾಧನೆ.
ಅನಂತವಾದ ಆತ್ಮವನ್ನು ಅನಂತವಾಗಿಯೇ ಸಾಧಿಸ ಬೇಕು.
ಸಿದ್ಧಿ ಎಂದರೆ ಕಾಲದಲ್ಲಿ ಕೊನೆಮುಟ್ಟುವುದೆಂದಲ್ಲ; ಕಾಲವನ್ನೇ ನುಂಗಿ ಮೀರುವುದು. 

Wednesday, June 20, 2012

ಯಾಕೆ ಬಡೆದಾಡ್ತಿ ತಮ್ಮ ಮಾಯಾ ಮೆಚ್ಚಿ ಸಂಸಾರ ಮೆಚ್ಚಿ

ಯಾಕೆ ಬಡೆದಾಡ್ತಿ ತಮ್ಮ ಮಾಯಾ ಮೆಚ್ಚಿ ಸಂಸಾರ ಮೆಚ್ಚಿ |
ನೀನೂಗದರಿಯೇ ತಮ್ಮ ಕಣ್ಣ ಮುಚ್ಚಿ ಮಣ್ಣ ಮುಚ್ಚಿ||

ಹೆಂಡ್ರು ಮಕ್ಕಳಿರುವರು ತಮ್ಮ ಎಲ್ಲಿ ತನಕ |
ಇದ್ದರೆ ತಿಮ್ಬೋತನಕ  ||
ಸತ್ತಾಗ ಬರುವರು ತಮ್ಮ ಕುಣಿತನಕ |
ಮಣ್ಣು ಮುಚ್ಚೋತನಕ ||

ಅಣ್ಣ  ತಮ್ಮ ಅಕ್ಕ ತಂಗಿ ಎಲ್ಲಿತನಕ |
ಬದುಕಿ ಬೆಳೆಯೋತನಕ ||
ಸತ್ತಾಗ ಬರುವರು ತಮ್ಮ ಕುಣಿತನಕ |
ಮಣ್ಣು ಮುಚ್ಚೋತನಕ ||

ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲಿತನಕ |
ನಿನ್ನ ಕೊರಳಿಗೆ ಕುಣಿಕೆ ಬಿಳೋತನಕ ||
ನಿನ್ನಾಸೆ ಪ್ರಾಣ ಪಕ್ಷಿ ಹರೋ ತನಕ |
ಕಳಚಯ್ಯ ಮಾಯದ ಪೊರೆಯ ಮುಕ್ತಿ ಹೊಂದಾಟ ||

ಒಡೆಯದ ಒಡಪೆ ಒಲವಿನ ಮುಡಿಪೇ

ಒಡೆಯದ ಒಡಪೆ ಒಲವಿನ ಮುಡಿಪೇ ಸನಿಹಕೆ ಸೆಳೆದವಳೇ
ಕಾಡುವ ಕನಸೇ ಕನ್ನಡಿ ತಿನಿಸೇ ದೂರವೇ ಉಳಿದವಳೇ
ಬಾರೆ ಬಾಬಳಿಗೆ ಇಂದೇ ಈಗಳಿಗೆ ಬಾ ಬಾ...

ಮಾಯಾ ಜಿಂಕೆಯ ನಡೆಯವಳೇ ಬೆಡಗಿನ ನಿಗೂಡ ನುಡಿಯವಳೇ 
ನೋಟದ ತುಂಬಾ ನಿನ್ನದೇ ಬಿಂಬ ನಾನ್ನೀ  ಕಂಗಳಿಗೆ
ಬಾರೆ ಬಾಬಳಿಗೆ ಇಂದೇ ಈಗಳಿಗೆ ಬಾ ಬಾ...

ಕಿನ್ನರಲೋಕದ ಕನ್ನಿಕೆಯೇ ನಿಜವನು ಮರೆಸುವ ಜವನಿಕೆಯೇ
ಕವಿದರು ಇರುಳು ನೀ ಬಳಿ ಇರಲು ಉಜ್ವಳದೀವಳಿಗೆ
ಬಾರೆ ಬಾಬಳಿಗೆ ಇಂದೇ ಈಗಳಿಗೆ ಬಾ ಬಾ...

ಕಲ್ಪನೆಯಲ್ಲೇ ಎಷ್ಟು ದಿನ ಕಾಡುವೆ ಹೀಗೆ ಪ್ರಿಯಕರನ
ಬಾ ಕನಿಕರಿಸಿ ನನ್ನನುವರಿಸಿ ಬಾಳಿನ _________
ಬಾರೆ ಬಾಬಳಿಗೆ ಇಂದೇ ಈಗಳಿಗೆ ಬಾ ಬಾ...

Thursday, March 8, 2012

ಧರ್ಮ

ಶ್ರೀ ತ.ರಾ.ಸು  ಅವರ ರಕ್ತ ರಾತ್ರಿ ಕಾದಂಬರಿಯ, ೧೧೭ - ೧೧೮ ಪುಟದಿಂದ.

ಧರ್ಮ ಮಾರುಕಟ್ಟೆಯಲ್ಲ. ಗುರು ವ್ಯಾಪಾರಿಯಲ್ಲ. ನೀನು ಶಿಷ್ಯತ್ವದ ಬೆಲೆ ಕೊಟ್ಟರೆ, ನಿನಗೆ ನನ್ನ ಅನುಗ್ರಹದ, ಆಶೀರ್ವಾದ ಮಾಲು ಕೊಡುತ್ತೇನೆ ಎನ್ನುವ ಕ್ಷುದ್ರ ವ್ಯಾಪಾರವೇ ಧರ್ಮ ? ನಾಯಕರು ಸ್ವಧರ್ಮೀಯರಲ್ಲ. ಅದಕ್ಕಾಗಿ ನಾವು ಅವರಿಗಾಗಿ ದುಡಿಯಬಾರದು; ಅವರ ತಲೆ ಹೋದರು ನಾವು ಸುಮ್ಮನಿರಬೇಕು, ಅಲ್ಲವೇ ? ಆ ಮಾತನ್ನೇ ಇನ್ನು ಅಷ್ಟು ದೂರ  ಎಳೆದು ನೋಡು. ಇದು ಎಲ್ಲಿಗೆ ನಿಲ್ಲುತದೆಯೋ. ಎಲ್ಲರೂ ನಿನ್ನ ಹಾಗೇ ಯೋಚಿಸಿದರೆ, ತಮ್ಮ ಧರ್ಮಿಯರಲ್ಲದೆ ಉಳಿದವರಿಗೆ ಒಳಿತಾಗಬರದು ಏನು ಚಿಂತಿಸಿದರೆ-- ಆಗ ನನ್ನ ನಿನ್ನ ತಲೆ ಉಳಿದೀತೇನೋ ಯೋಚಿಸು. ಊಹು -- ಭೂಮಿ ಪರಸ್ಪರ ಹೋರಾಟದ ಕುರುಕ್ಷೆತ್ರವಾಗಿ, ನೆತ್ತರ ಕಡಲಾಗಿಹೊಗುತ್ತದೆ. ಆ ರಕ್ತ ಪ್ರಳಯದಲ್ಲಿ ಮನುಷ್ಯನೂ ಉಳಿಯುವುದಿಲ್ಲ; ಧರ್ಮವೂ ಉಳಿಯುವುದಿಲ್ಲ. ಜಗತ್ತೂ ಉಳಿಯುವುದಿಲ್ಲ. ನಿಮ್ಮಂತಹ ಶಿಷ್ಯರು ಬಂದೇ ಎಷ್ಟೂ ಧರ್ಮಗಳು ನೆತ್ತರುಗೆಸರಿನಲ್ಲಿ ಹೆಸರುಳಿಯದೆ ಅಳಿಸಿಹೂಗಿರುವುದು. ನಿನ್ನಂತಹ ಶಿಷ್ಯರೇ ದೊರೆತರೆ ನಾಳೆ ವೀರಶೈವ ಧರ್ಮಕಾಗುವುದೂ ಅದೇ ಗತಿಯೇ. ಛಿ! ಬಿಡು ಆ ಬುದ್ಧಿಯನ್ನು. ಧರ್ಮ ಜನಕ್ಕೆ ದಾರಿ ತೋರುವ ದೀಪ; ಯಾವುದೋ ಕುರುಡುದಾರಿಯಲ್ಲಿ ನಡೆಸುವ ಕನ್ನಕಪಟವಲ್ಲ. ಸಕಲ ಲೋಕಕ್ಕೆ ಶ್ರೇಯಾಭಿಲಾಷಿಯಾದ ಈ ಕಲ್ಯಾಣಜ್ಯೋತಿಯನ್ನು, ನಮ್ಮ ಪಂಥಕ್ಕೆ ಬರದವರನ್ನು  ಸುಡುವ ಚಿತಾಗ್ನಿಯಾಗಿ ಮಾಡುವ, ಸತ್ತವರನ್ನು ಬದುಕಿಸುವ ಅಮೃತಕ್ಕೆ ಸ್ವಾರ್ಥದ ನಂಜು ಬೆರೆಸಿ, ಲೋಕಮಾರಕವಾದ ಹಾಲಾಹಲವನ್ನಾಗಿ ಮಾಡುವ ಅಂಧಬುದ್ಧಿ ಯೊಂದನ್ನೇನೇ ನೀವು ವೀರಶೈವ ಧರ್ಮವನ್ನು ಅವಲಂಬಿಸಿ ಕಲಿತದ್ದು ! ಶರಣನೆಂದುಕೊಂಡರೆ ಏನೆಂದುಕೊಂಡೆ ? ಸ್ವಾರ್ಥದ ಗಾಣವಾಡಿಸುವ ಗಾಣಿಗ ಎಂದುಕೊಂಡೆಯಾ ? ಶರಣ ಗಂಧದ ಕೊರಡಿದ್ದಂತೆ; ತಾನು ತೇಯ್ದು ಲೋಕಕ್ಕೆ ಕಂಪನ್ನೊಡಬೇಕು; ಕಬ್ಬಿನಂತೆ ತಾನು ಹಿಂಡಿ ಲೋಕಕ್ಕೆ ಸುಧೆಯುಣಿಸಬೇಕು; ಲಿಂಗದೀಕ್ಷೆ ಈ ಪವಿತ್ರ ವ್ರತದ ರತ್ನಕಂಕಣ. 'ದಯೆಯೇ ಧರ್ಮದ ಮೂಲವಯ್ಯ' ಎಂದು ಸಾರಿ, ವೀರಶೈವ ಧರ್ಮಕ್ಕೆ ರತ್ನಸಿಂಹಾಸನವನ್ನು ಸ್ಥಾಪಿಸಿದ ಜಗಜ್ಯೋತಿ ಬಸವಣ್ಣನವರನ್ನು, ನಿನ್ನ ಸ್ವಾರ್ಥದ ಫಲಾಫಲವನ್ನು ತೂಗುವ ತಕ್ಕಡಿಯನ್ನಾಗಿ ಮಾಡಬೇಡ. ಸಾಧ್ಯವಿದ್ದರೆ, ಅವರನ್ನು ಗುರುಗಳು ಎಂದುಕೊಂಡ ನೀನು ಅವರ ಮಟ್ಟಕ್ಕೆ ಏರಬೇಕು. ಆ ಶಕ್ತಿ ಇಲ್ಲದಿದ್ದರೆ, ಆ ದಿವ್ಯಾತ್ಮಗಳನ್ನು ನಿನ್ನ ಅಲ್ಪತನದ ಮಟ್ಟಕ್ಕೆ ಎಳೆದು, ಅವರ ಶಿಷ್ಯರೆಂದೇ ಹೇಳಿಕೊಂಡು ಅವರಿಗೆ ಅಪಮಾನ ಮಾಡಬೇಡ. ಸ್ವಾರ್ಥದ ಪಶು, ಮೆಯ್ದು ಕೊಬ್ಬುವ ಹುಲ್ಲುಗಾವಲಲ್ಲ ಧರ್ಮ. ಈ ಧರ್ಮದೀಕ್ಷಾಬದ್ಧರಾದವರು ಏನು ಮಾಡಿದರೂ ಶಿವ ಮೆಚ್ಚಲಿ ಎಂದು ಮಾಡಬೇಕು ನುಡಿಯಬೇಕು ಹೊರತು, ಇದರಲ್ಲಿ ನನಗೇನು ಸಿಕ್ಕಿತು ಎಂದು ಕಂಡವರ ಚಿನ್ನವನ್ನು ತನ್ನ ಒರೆಗಲ್ಲಿಗೆ ಉಜ್ಜಿಕೊಂಡು. ಗುಂಜಿ ತೂಕದ ಚಿನ್ನ ಗಳಿಸುವ ಚಿನಿವಾರ ಬುದ್ಧಿಗೆ ಇಲ್ಲಿ ಎಡೆಯಿಲ್ಲ. ನಿನ್ನ ಹಾಗೇ ನಾವೂ ಆಡಿದರೆ ನಾಳೆ ಈ ಧರ್ಮ ರಸಾತಳಕ್ಕಿಳಿದು ಹೋದೀತು; ಶಿವತಂದೆ ಪ್ರಕ್ಷುಬ್ಧನಾಗಿ ರುದ್ರನಾಗಿ ನಮ್ಮ, ನಿಮ್ಮ , ಎಲ್ಲರ ತಲೆಯನ್ನು ಬೇಟೆಯಾಡಿಯಾನು.