Wednesday, October 19, 2011

ಯಾತಕ್ಕೆ ಮಳೆ ಹೋದವೋ ಶಿವ ಶಿವ ಶಿವ... ಲೋಕಾ ತಲ್ಲಣಿಸುತಾವೋ...

ಯಾತಕ್ಕೆ ಮಳೆ ಹೋದವೋ ಶಿವ ಶಿವ ಶಿವ |
ಲೋಕಾ ತಲ್ಲಣಿಸುತಾವೋ  ಶಿವ ಶಿವ ||
ಬೇಕಿಲ್ಲಾದಿದ್ದರೆ  ಬೆಂಕಿಯ ಮಳೆ ಸುರಿದು |
ಉರಿಸಿ ಕೊಲ್ಲಲುಬಾರದೆ!! ||

ಹೊಟ್ಟೆಗೆ ಅನ್ನ ಇಲ್ಲಾದಲೇ  |
ನಡೆದರೆ ಜೋಲಿ ಹೊಡೆಯುತೆಲೆ ||
ಪಟ್ಟದಾನೆಯಂತ ಸ್ತ್ರಿಯಾರು ಸೊರಗಿ |
ಸೀರೆ ನಿಲ್ಲೋದಿಲ್ಲ ಸೊಂಟಾದೇಲೆ ||

ಹಸುಗೂಸು ಹಸುವಿಗೆ ತಾಳದೆಲೆ |
ಅಳುತಾವೆ ರೊಟ್ಟೀ ಕೇಳುತಲೇ ||
ಹಡೆದ ಬಾಣಂತಿಗೆ  ಅನ್ನಾವು  ಇಲ್ಲದೆಲೆ |
ಏರುತಾವೆ   ಮೊಳಕೈಗೆ ಬಳೆ ||

ಒಕ್ಕಾಲು  ಮಕ್ಕಳಂತೆ |
ಅವರಿನ್ನು ಮಕ್ಕಳನು ಮಾರುಂಡರು  ||
ಮಕ್ಕಳನು ಮಾರುಂಡು ದುಕ್ಕವನ್ನು ಮಡುತಾರೆ  |
ಮುಕ್ಕಣ್ಣ ಮಳೆ ಕರುಣಿಸೂ ||


2 comments:

  1. ಯಾರದೋ ಈ ಪದ್ಯ? ನೀನೆ ಬರೆದಿದ್ದಾ?

    ReplyDelete
  2. ಇದನ್ನು ಬರೆದವರು ಯಾರು ತಿಳಿಯದು. ಈ ಪದ್ಯವನ್ನು ಸಿ.ಅಶ್ವತ್ ಮತ್ತು ಸಂಗಡಿಗರು ಹಾಡಿದ್ದಾರೆ.

    ReplyDelete