ನಾನಾರೆಂಬುದು ನಾನಲ್ಲ, ಈ ಮಾನುಷ ಜನ್ಮವು ನಾನಲ್ಲ |
ನಾರಾಯಣವರ ಬ್ಹ್ರಂಹಸದಾಶಿವ, ನೀಯೆಣಿಸುವ ಗುಣ ನಾನಲ್ಲ ||
ಮಾತಾಪಿತಸುತ ನಾನಲ್ಲ, ಭೂನಾಥನಾದವ ನಾನಲ್ಲ |
ಜಾತಿಗೋತ್ರಗಳು ನಾನಲ್ಲ, ಬಹು ಪ್ರೀತಿಯ ಸತಿಸುಥ ನಾನಲ್ಲ ||
ವೇದ ಓದುಗಳು ನಾನಲ್ಲ, ಬರಿ ವಾದ ಮಾಡಿದವ ನಾನಲ್ಲ |
ನಾದಬಿಂದು ಕಳಬೇಧವಸ್ತು ನಿಜ ಬೋದದವದಲ್ಲಿದವ ನಾನಲ್ಲ ||
ನಾನೀಬೇಧವು ನಾನಲ್ಲ, ನಾ ಶಿಶುನಾಳದೀಶನ ಬಿಡಲಿಲ್ಲ |
ನಾ ಅಳಿಯದೆ ನಾತಿಳಿಯಲುಬಾರದು ನೀಯೆಣಿಸುವ ಗುಣ ನಾನಲ್ಲ ||
No comments:
Post a Comment