ಈ ಕೆಳಕಂಡ ವಿಷಯಗಳನ್ನು ಬೀಚಿಯವರ ಆಟೋ ಪುಸ್ತಕದಿಂದ ಆಯ್ಕೆ ಮಾಡಲಾಗಿದ್ದು, ಈ ಪ್ರಕಟಣೆಯ ಮುಖ್ಯ ಉದ್ದೇಶ ಕನ್ನಡ ಓದುಗರನ್ನು ಪುಸ್ತಕಗಳತ್ತ ಸೆಳೆಯುವುದಷ್ಟೇ.
---------------------------------------------------------
"ಏನು ಸ್ವಾಮಿ, ಹೇರಿಗೆಯಾಯಿತೇ ಮನೆಯಲ್ಲಿ"
"ಆಯಿತು. ಮನೆಯಲ್ಲಲ್ಲ, ಆಸ್ಪತ್ರೆಯಲ್ಲಿ."
"ಏನು ಮಗನೋ?... ... "
"ಆ ಪುಣ್ಯ ಎಲ್ಲಿದೆ ? ಸುಡುಗಾಡು ಹೆಣ್ಣು."
ಹುಟ್ಟುವಾಗಲೇ ಈ ಸುಸ್ವಾಗತ ಹೆಣ್ಣಿಗೆ.
---------------------------------------------------------
"ರಿಸಲ್ಟ್ ಬಂತೇ, ನಿಮ್ಮ ಮಗನದು"
"ಮೂರು ದಿನವಾಯಿತಲ್ಲ ಆಗಲೇ"
"ಏನಾಯಿತು ಪಾಸು ತಾನೇ ಹುಡುಗ?"
"ಪಿಂಡ ಮತ್ತೆ ಫೇಲು.?"
"ಪಾಪ ಏನು ಮಾಡುತ್ತಿರಿ ಮತ್ತೆ?"
"ಮಾಡುವುದೇನು ಸ್ಕೂಲ್ ಬಿಡಿಸಿದರೆ ಆಗುತ್ತಯೇ ಮತ್ತೆ ಓದುತ್ತಾನೆ."
"ಮರತೇ ಬಿಟ್ಟಿದ್ದೆ. ನಿಮ್ಮ ಮಗಳು?"
"ಆ ಮುಂಡೆದಕ್ಕೆ ರಾಂಕ್ ಬಂದಿದೆ ನೋಡಿ. ಫಸ್ಟ್ ಕ್ಲಾಸಿನಲ್ಲಿ ಬಂದಿದ್ದಾಳೆ ಅಂದರೆ?"
"ಕಳಿಸಿ ಕಾಲೇಜಿಗೆ. ಚುರುಕು ಬುದ್ಹಿಯವರನ್ನು......"
ಕೆಲಸವಿಲ್ಲ ಮಾಡಲಿಕ್ಕೆ. ಈ ವರ್ಷ ಮದುವೆ ಮಾಡಿಬಿಡುತ್ತೇನೆ. ಕಾಲೇಜು ಬೇಡ, ಕ್ಯಬೇಜೂ ಬೇಡ"
"ಅದೂ ಸರಿಯೆ ಅನ್ನಿ. ನಿಮ್ಮದು ದುರ್ದೈವ, ಪಾಪ ಇವಳೇ ಫೇಲು ಆಗಿ, ಮಗನು ಪಾಸ್ ಆಗಬಾರದಿತ್ತೆ?"
ಬಹು ಕಲಿತವರು ಕೂಡ ಹೆಣ್ಣು, ಗಂಡನ್ನು ಹೀಗೆ ಕಾಣುತ್ತಾರೆ.
---------------------------------------------------------
ಈ ಮನೋಭಾವವೇ ಅನಾಹುತಕ್ಕೆ ಕಾರಣವಾಯಿತು.
ಅಕ್ಕನ ಹೆಣದ ಮುಂದು ನಿಂತು ವಲಿ ಅನ್ನುತ್ತಾನೆ.
"...... ಆ ಹಲ್ಕಾರಾಂಡ್ ಖರಾಬ್ ಆಗಿದ್ಳು."
"ಬಾಯಿ ಮುಚ್ಚೋ ಬದ್ಮಾಷ್! ಗಂಡು ಖರಾಬ್ ಆದ್ರೆ ದಿಲ್ದಾರ್ ಆದ್ಮಿ ಹೆಣ್ಣು ದಿಲ್ದಾರ್ ಆದ್ರೆ ಖರಾಬ್ ಅಮ್ತೀಯಾ? ಸೈತಾನ್!"
---------------------------------------------------------
"ಒಡಹುಟ್ಟಿದವರು"
ಅಕ್ಕ ತಮ್ಮ ಆಗಿರಲು ಜಾತಿ ಅಡ್ಡ ಬರುತ್ತದೆಯೇ? ಒಡಹುಟ್ಟಿದವರೇ ಆಗಬೇಕೆನು ಒಡಹುಟ್ಟಿದವರಂತಿರಲು?
ಒಡಹುಟ್ಟಿದವರಲ್ಲಿ ನಾಯಿಯಂತೆ ಕಚ್ಹಾಡುವವರೇ ಹೆಚ್ಚು. ಒಡನಾಡಿಗಳು ಹೆಚ್ಚು ಅಕ್ಕರದಿಂದ ಬಾಳಿ ಬದಕುತ್ತಾರೆ.
---------------------------------------------------------
"ತಂದೆಯಂತೆ ಮಗ"
ತಂದೆ ಮಾಡಿದಂತೆ ಮಗನೂ ತಪ್ಪು ಮಾಡುತ್ತಾನೆ. ತಪ್ಪು ಮಾಡುವುದು ಮಾನವ ಜನ್ಮಸಿದ್ದವಾದ ಹಕ್ಕು. ಆದರೆ ತಂದೆ ಮಾಡಿದ ತಪ್ಪನ್ನೇ ಮಗನೂ ಏಕೆ ಮಾಡಬೇಕು? ಈ ಏಬಡ ಜಗತ್ತಿನಲ್ಲಿ ತಪ್ಪುಗಳಿಗೂ ಬಡತನವೇ? ತಪ್ಪುಗಳಲ್ಲಿ ವೈವಿಧ್ಯತೆ ಇಲ್ಲವೇ, ಮಾಡಬೇಕೆನ್ನುವ ಮಗನಿಗೆ? ತಂದೆ ಒಂದು ತಪ್ಪು ಮಾಡುತ್ತಾನೆ, ಮಗನು ಅದರಿಂದ ಸಹಜವಾಗಿಯೇ ಪಾಠ ಕಲಿಯುತ್ತಾನೆ. ತತ್ಫಲವಾಗಿ ಆ ತಪ್ಪನ್ನು ಬಿಟ್ಟು ಬೇರೊಂದು ಹೊಸತನ್ನು ಇವನು ಮಾಡುತ್ತಾನೆ.
ಒಂದು, ಎರಡು, ಮೂರು ಆದವು ಸಾಲಾಗಿ, ದಶರಥ ಮಹಾರಾಜನಿಗೆ ಮೂವರು ಹೆಂಡಂದಿರು. ಒಬ್ಬಳು ಸತ್ತ ನಂತರ ಇನ್ನೊಬ್ಬಳು, ಅವಳ ನಂತರ ಮತ್ತೊಬಳು ಅಲ್ಲ. ಮೂವರೂ ಏಕಕಾಲದಲ್ಲಿ ಸಾಯದೆ ಇದ್ದರು ಬದುಕಿ. ಗಂಡನೇ ಸತ್ತ ಮೊದಲು . ಮೂವರಿಗೂ ಒಂದೇ ಬಾರಿಗೆ ವೈಧವ್ಯ ಪಟ್ಟವನ್ನು ಕರುಣಿಸಿ. ಮೂವರು ಸ್ತ್ರೀಯರನ್ನು ಮದುವೆಯಾಗುವುದೆಂದರೆ ಸಾಮಾನ್ಯವೇ? ಒಂದು ಇಡೀ ಜಾತ್ರೆಯನ್ನೇ ಮಾಡುವೆ ಆದಂತೆಯೇ!
ತಂದೆಯ ತಪ್ಪಿನ ಉಪಯೋಗವು ಮಗನಿಗೆ ಲಭಿಸಿತು. ಒಂದೆಂದರೆ ಒಂದೇ ಪಾಂಡವರ ಕಾಲದಲಿದ್ದ ಒನ್ ಬೈ ಫೈವ್ ಪದ್ಧತಿ ಇರಲಿಲ್ಲ ರಾಮನ ಕಾಲದಲ್ಲಿ ಕಾರಣ ಒಂದೇ ಹೆಣ್ಣನ್ನು ಲಗ್ನವಾದ ಅವಳನ್ನೂಬಿಟ್ಟಿದ್ದ ಕೆಲವುಕಾಲ, ದಶರಥ ಮಗನಾದ ರಾಮಚಂದ್ರ. ಹೆಂಡತಿಯ ಮಾತಿಗಾಗಿ ಮಗನನ್ನು ಅರಣ್ಯಕ್ಕೆ ಕಳಿಸಿದ್ದ ದಶರಥ. ಊರವರ ಮಾತಿಗಾಗಿ ಹೆಂಡತಿಯನ್ನೇ ಅದವಿಗತ್ತಿದ್ದ ಶ್ರೀರಾಮ. ಮನೆಯಲ್ಲಿ ಹುಟ್ಟಿದ್ದ ಮಗನನ್ನು ತಂದೆ ಅದವಿಗಟ್ಟಿದ, ಅಡವಿಯಲ್ಲಿ ಹುಟ್ಟಿದ ಮಕ್ಕಳನ್ನು ಇವನು ಮನೆಗೆ ತಂದ.
ಪುರಾಣದ ತುಂಬ ಇಂತಹ ಉದಾಹರಣೆಗಳು ಕೇಳಿದಷ್ಟು ಇರುವಾಗ "ತಂದೆಯಂತೆ ಮಗ" ಎಂದು ಅದಾರೋ ಎಂದರೆಂದು ಎಲ್ಲರೂ ಅನ್ನುವುದೇ? ಅಥವಾ ಎಲ್ಲರೂ ಅನ್ನುತ್ತರೆಂದು ಮಗನು ತಂದೆಯಂತೆ ಆದಾನೆ??